Wednesday, February 22, 2012

ತಪ್ಪು / ಸರಿ, ಪಾಪ / ಪುಣ್ಯ ಸತ್ಯ / ಸುಳ್ಳು

ಯಾವುದೇ ಕಾರ್ಯ ಮಾಡುವಾಗ, ಕೆಲ ಕಾಲವಾದರೂ ನಾವು ಯೋಚಿಸುತ್ತೇವೆ. ಒಮ್ಮೆ ಆ ಕಾರ್ಯ ಮಾಡಿದ ಮೇಲೆ ನಾವು ಮಾಡಿರುವುದೇ ಸಮಂಜಸವಾದ ಕೆಲಸ ಎಂದುಕೊಳ್ಳುತ್ತೇವೆ.
ಮೇಲಿನ ನಮ್ಮ ದೃಷ್ಟಿಯಿಂದ ನೋಡಿದರೆ ಎಲ್ಲವು ಸರಿಯೇ, ಎಲ್ಲವು ಪುಣ್ಯವೆ, ಎಲ್ಲವು ಸತ್ಯವೆ.

ಸಹಜವಾಗಿ ಹೇಳುವುದಾದರೆ, ಎಲ್ಲಿಯವರೆಗೆ ನಾವು ಬೇರೆಯವರಿಗೆ ಉದ್ದೇಶಿತವಾಗಿ ಹಾನಿ ಮಾಡದೆ ನಮ್ಮ ಕೆಲಸ, ಕಾರ್ಯಗಳನ್ನು ಮಾಡಿಕೊಳ್ಳುತ್ತೇವೆಯೋ, ಅಲ್ಲಿಯವರೆಗೆ ಎಲ್ಲವೂ ಸೂಕ್ತ.

ಮತ್ತೊಂದು ಕೋನದಿಂದ ನೋಡಿದರೆ, ಈ ರೀತಿ, ಎಲ್ಲಾ ಕಾಲದಲ್ಲೂ ನಡೆದು ಕೊಳ್ಳಲೂ ಸಾಧ್ಯವಿಲ್ಲ.ಅಂತಹ ಸಂದರ್ಭಗಳಲ್ಲಿ ನಾವು ಮಾಡಿದ ಕೆಲಸ ನಮಗೆ ಸರಿ ಎನಿಸಿದರು, ಮತ್ತೊಬ್ಬರಿಗೆ ತಪ್ಪೆನಿಸಬಹುದು. ಆಗ ಇದೇ ಕೆಲಸ ತಪ್ಪು / ಪಾಪ / ಸುಳ್ಳು ಎನಿಸಿಕೊಳ್ಳುತ್ತದೆ.

ಹೀಗೆ ನೋಡಿದರೆ ತಪ್ಪು / ಪಾಪ / ಸುಳ್ಳುಗಳು ಸಮಯ ಸಂದರ್ಭಗಳಿಗೆ ಅನುಸಾರವಾಗಿ ಸರಿ / ಪುಣ್ಯ / ಸತ್ಯ ಗಳಾಗಿ ತಮ್ಮ ರೂಪವನ್ನು ಬದಲಾಯಿಸುತ್ತಿರುತ್ತೇವೆ.

ಕಾಲಾಯ ತಸ್ಮೈ ನಮ: !!



ಅರಿವಿನ ಮೂಲ ಹುಡುಕುವಾಗ !

ಎಲ್ಲಾ ಅರಿವುಗಳು ನಮ್ಮ ಮೆದುಳಿನಿಂದಲೇ ಆಗುವುದೆಂದು ತಿಳಿದಿದ್ದೇವೆ. ನಾವು ಈ ನಮ್ಮ ಅರಿವನ್ನು ನಮ್ಮ ಮೆದುಳಿಗೆ ವರ್ಗಾಯಿಸಿ, ಅಲ್ಲಿ ಏನು ಆಗುತ್ತಿದೆ? ಯಾವ ಭಾಗದಿಂದ ಈ ಅರಿವು ಆಯಿತು? ಎಂದು ತಿಳಿಯ ಬಯಸಿದಾಗ ಏನಾಗುತ್ತದೆ?

ತಾರ್ಕಿಕವಾಗಿ ಯೋಚಿಸಿದರೆ, ನಾವು ಒಂದು ಮರಳಿ ಬಾರದ ವರ್ತುಲದಲ್ಲಿ ಸಿಲುಕಿ ಬಿಡಬೇಕು.
ಸರಳವಾಗಿ ಹೇಳುವುದಾದರೆ, ಎರಡು ಕನ್ನಡಿಗಳನ್ನು ಒಂದರ ಮುಂದೆ ಇನ್ನೊಂದಾಗಿ ಇಟ್ಟಾಗ ಆಗುವ ಪರಿಣಾಮವೇ ಇಲ್ಲಿ ಆಗಬೇಕು.

ಆಂಗ್ಲ ಭಾಷೆಯಲ್ಲಿ ಇದನ್ನು "Infinite Loop" ಎನ್ನಬಹುದು.