ಮಾನವರಾದ
ನಾವೆಲ್ಲರು ಇತರರಿಂದ, (ನಾವು ಕೂಡ ಇತರರನ್ನು)
ಕೇಳುವ ಸಾಮಾನ್ಯವಾದ ಪ್ರಶ್ನೆ,
ನಿಮ್ಮ ಜೀವನದ ಗುರಿ ಏನು?
ಉದ್ದೇಶ್ಯ ಏನು?
ಸಾಮಾನ್ಯವಾಗಿ ಸಿಗುವ
ಉತ್ತರಗಳು -
ಕೆಲಸಗಳಿಗೆ
ಸಂಭದಿಸಿದ ಹಾಗೆ
- ನಾನು ಇಂಜಿನಿಯರ್ ಆಗಬೇಕು. ನಾನು ಡಾಕ್ಟರ್
ಆಗಬೇಕು. ನಾನು ದೊಡ್ಡ ಕವಿಯಾಗಬೇಕು, ಲೇಖಕನಾಗಬೇಕು.
ಅಭ್ಯಾಸ,
ಹವ್ಯಾಸಗಳಿಗೆ ಸಂಭದಿಸಿದ ಹಾಗೆ
- ನಾನು ಹೊರದೇಶಕ್ಕೆ ಹೋಗಿಬರಬೇಕು. ನಾನು ಪ್ರಪಂಚ ಸುತ್ತಿ
ಬರಬೇಕು. ನಾನು ಹೆಚ್ಹು ಪುಸ್ತಕಗಳನ್ನು
ಕೊಂಡುಕೊಳ್ಳಬೇಕು, ಎಲ್ಲವನ್ನು ಓದಬೇಕು.
ಭಾವನೆಗಳಿಗೆ
ಸಂಭದಿಸಿದ ಹಾಗೆ - ನಾನು ಯಾವಾಗಲೂ
ಸಂತೋಷವಾಗಿರಬೇಕು. ನಾನು ಎಲ್ಲರಿಗೂ ಬೇಕಾದವನಾಗಿರಬೇಕು.
ನಾನು ತುಂಬಾ ಬುದ್ಧಿವಂತನಾಗಬೇಕು.
ಹೀಗೆ ಉತ್ತರಗಳನ್ನು ಬರೆಯುತ್ತಲೇ ಹೋಗಬಹುದು, ಅಲ್ಲವೇ?
ಗುರಿ -
ಈ ಪದದ ನಿಘಂಟಿನ
ಅರ್ಥ ಉದ್ದೇಶ್ಯ, ಅಂದುಕೊಂಡದ್ದನ್ನು ಸಾದಿಸುವುದು.
ಸರಿ, ಈಗ ಇದನ್ನೇ ಇನ್ನೊಂದು
ಕೋನದಿಂದ ನೋಡುವ, ಹತ್ತಾರು ಪ್ರಶ್ನೆಗಳನ್ನು
ಈ ಗುರಿಯಮುಂದೆ ಹಾಕುವ,
ಉತ್ತರ ಹುಡುಕುವುದನ್ನೇ ನಮ್ಮ ಈ ಲೆಖನದ ಗುರಿಯನ್ನಾಗಿಸುವ,
ಹೇಗೆ ಸರಿ ತಾನೆ? ಬನ್ನಿ
ಒನ್ದೊಂದಾಗಿ ಕೈಗೆತ್ತಿಕೊಳ್ಳುವ.
೧.ಗುರಿ
ಎಂದರೇನು?
೨.ಗುರಿ
ಏಕೆ ಬೇಕು?
೩.ಗುರಿ
ಇರಲೇಬೇಕೇ?
೪.ಎಲ್ಲಾ
ಜೀವಜಗತ್ತಿನ ಬಾಳಿನಲ್ಲೂ ಗುರಿ ಇರುತ್ತದೆಯೇ?
೫.ಎಲ್ಲರು
ತಮ್ಮ ತಮ್ಮ ಗುರಿಯನ್ನು ಮುಟ್ಟುತ್ತಾರೆಯೇ?
೬.ಗುರಿಯಿಲ್ಲದ
ಬಾಳು ಹಾಳೇ?
೭.ಗುರಿಯಿಲ್ಲದ
ಬಾಳು ಹೇಗಿರುತ್ತದೆ?
೮.ಗುರಿ
ತಲುಪದ ಬಾಳು ಹೇಗಿರುತ್ತದೆ ಅಥವಾ
ಬದಲಾಗುತ್ತದೆ?
೯.ಗುರಿ ತಲುಪಿದ ನಂತರದ ಬಾಳು ಹೇಗಿರುತ್ತದೆ?
೧. ಗುರಿ
ಅಂದರೆ ಬಹುಶ: ನಮ್ಮಲ್ಲಿಲ್ಲದಿರುವುದನ್ನು ನಾವು ಪಡೆಯಬೇಕೆನ್ನುವುದು,
ನಮಗೆ ಗೊತ್ತಿಲ್ಲದ್ದನ್ನು ತಿಳಿದು ಕೊಳ್ಳಬೇಕೆನ್ನುವುದು, ನಮ್ಮ
ಕೈಯಲ್ಲಿ ಮೊದಲು ಮಾಡಲಸಾಧ್ಯವಾದದ್ದನ್ನು ಮಾಡಲೇಬೇಕು
ಅಂದುಕೋಳ್ಳುವುದು. ಈ ’ವುದು’ಗಳಲ್ಲಿ
ಯಾವುದೋ ಒಂದು ಹೌದೇ? ನನಗನ್ನಿಸಿದ
ಹಾಗೆ ಹೌದು. ನಿಮ್ಮ ಉತ್ತರ
ಬೇರೆ ಇರಬಹುದು.
೨. ಗುರಿ
ಏಕಿರಬೇಕು? ಇದಕ್ಕೆ ಉತ್ತರ, ಅದು
ನಾವು ಬೇಡ ಅಂದರೂ ಇದ್ದೇ
ಇರುತ್ತದೆ. ಇಲ್ಲ ಅನ್ನುತ್ತಿರೇನು? ಈಗ
ನಿಮ್ಮನ್ನೇ ನೋಡಿ ಈ ನನ್ನ
ಲೇಖನವನ್ನು ನೀವು ಏಕೆ ಓದುತ್ತಿದ್ದೀರಿ?
ನಾನು ಮೇಲೆ ತಿಳಿಸಿದ ಯಾವ
’ವುದು’ ನೋಡಿ? ಗುರಿ ಅನ್ನುವುದು
ನಮ್ಮ ಜನನದಿಂದ ಮರಣದವರೆ ಜೊತೆಯೆಲ್ಲೇ
ಇರುತ್ತದೆ, ಒಂದು ಮಾತ್ರ ವ್ಯತ್ಯಾಸ;
ಸಮಯ ಕಳೆದಂತೆ ಗುರಿಯ ಮಾದರಿಗಳು,
ಅದನ್ನು ಗಳಿಸಿದ ನಂತರದ ಪರಿಣಾಮಗಳು
ಬದಲಾಗುತ್ತವೆ, ಇದನ್ನು ನಮ್ಮ ಮುಂದಿನ
ಪ್ರಶ್ನೆಗಳ ಉತ್ತರವಾಗಿ ನೋಡುವ.
೩.ಗುರಿ
ಇರಲೇಬೇಕೆಂದಿಲ್ಲ, ಕೆಲವು ವೇಳೆ, ಮೇಲೆ ತಿಳಿಸಿದ
ಹಾಗೆ ಜೊತೆಯಲ್ಲೇ ಅವು ಗೊತ್ತಿಲ್ಲದಂತೆ ಬರುತ್ತವೆ ಅವನ್ನು ನಾವು ಗುರಿಯನ್ನುವುದಿಲ್ಲ
ಅಷ್ಟೇ. ಸಮಾಜದ ಕಣ್ಣಿನಲ್ಲಿ ಅದು
ಬದುಕಿನ ಕೆಲವು ಅಗತ್ಯತೆಗಳು, ಅಥವಾ
ಘಟ್ಟಗಳು - ಹುಟ್ಟು, ಬಾಲ್ಯ, ವಿದ್ಯಾಭ್ಯಾಸ,
ಕೆಲಸ, ಮದುವೆ, ಸಂಸಾರ, ಮಕ್ಕಳು,
ಜವಾಬ್ದಾರಿ,ಮುಪ್ಪು,ರೋಗ,ಮರಣ.
ಕೆಲವನ್ನು
ನಾವು ಬೇಕಂತಲೇ ನಮ್ಮ ಜೀವನದಲ್ಲಿ
ಹಾಕಿಕೊಳ್ಳುತ್ತೇವೆ - ಒಳ್ಳೆಯ ಹುಟ್ಟು, ಉನ್ನತ
ಬಾಲ್ಯ, ಒಳ್ಳೆಯ ವಿದ್ಯಾಭ್ಯಾಸ, ಕೈತುಂಬ
ಸಂಬಳ ತರುವ ಕೆಲಸ, ಒಳ್ಳೆಯ
ಹುಡುಗಿಯೊಂದಿಗೆ ದುಬಾರಿ ಮದುವೆ, ಸುಖ
ಸಂಸಾರ, ಗುಣವಂತ ಮಕ್ಕಳು, ಸಧ್ರುಡವಾದ
ಜವಾಬ್ದಾರಿ, ಮಕ್ಕಳು ಮರಿ ಮಕ್ಕಳೊಂದಿಗಿನ
ಮುಪ್ಪು, ನಿರೋಗ, ನೋವಿಲ್ಲದ ಮರಣ.
ಹೌದು ಎಲ್ಲಾ ಪ್ರಾಣಿ ವರ್ಗಗಳಲ್ಲೂ
ಗುರಿಯೆನ್ನುವುದು ಹಾಸು ಹೊಕ್ಕಾಗಿರುತ್ತದೆ.
ಮಿಕ್ಕ ಪ್ರಶ್ನೆಗಳ ಉತ್ತರ
ಸಧ್ಯದಲ್ಲೇ…