ಆ ದಿನ ಹೀಗೆ ಎಂದಿನಂತೆ
ಆಫೀಸಿನ ಕಡೆ ನನ್ನ ಪ್ರಯಾಣ ನಡೆದಿತ್ತು, ದಾರಿಯಲ್ಲಿ ಒಂದು ಮಗು ತನ್ನ ತಾಯಿಯನ್ನ ಅಂಗಡಿಯಲ್ಲಿ ಏನನ್ನೋ
ಕೊಡಿಸುವಂತೆ ಒತ್ತಾಯ ಮಾಡುತಿತ್ತು. ನಾನು ಕ್ಷಣ ಹೊತ್ತು ತಾಯಿ-ಮಗುವಿನ ಈ ಸನ್ನಿವೇಶವನ್ನು ನೋಡಿ
ನನ್ನ ದಾರಿಯಲ್ಲಿ ಮುಂದುವರೆದೆ. ಈ ಘಟನೆ ಈಗ ನಾನು ಬರೆಯುತ್ತಿರುವ ಈ ಲೇಖನಕ್ಕೆ ಮುನ್ನುಡಿಯಾಯಿತೆನ್ನಬಹುದು.
ನಾವೆಲ್ಲರು ಜೀವನದಲ್ಲಿ,
ಈ ’ಬೇಕು’ ಎಂಬ ಘಟ್ಟವನ್ನು ನಮ್ಮ ಬಾಲ್ಯದಲ್ಲಿ
ಹೆಚ್ಚಾಗಿ ಅನುಭವಿಸುತ್ತೇವೆ. ಆಗ ನಮ್ಮ ಈ ಬೇಕುಗಳು ಕೇವಲ ಆಹಾರ-ತಿಂಡಿಗಳ, ಆಟದ-ಸಾಮಾನುಗಳ ಚೌಕಟ್ಟಿಗೆ
ಮಾತ್ರ ಸೀಮಿತವಾಗಿರುತ್ತವೆ. ಕಾಲ ಕಳೆದಂತೆ ಅಥವಾ ನಮ್ಮ ತಲೆಯಲ್ಲಿನ ಯೋಚನೆಗಳು ಹೊಸ ಆಯಾಮಗಳಿಗೆ ತೆರೆದುಕೊಂಡತೆ
ನಮ್ಮ ಈ ’ಬೇಕು’ಗಳು ಬದಲಾಗಬಹುದು.
ನಮ್ಮನ್ನ ನಾವು ಈಗ
teenageನ ಲೋಕದಲ್ಲಿರುವುದಾಗಿ ಅಂದುಕೊಂಡು, ಈ ’ಬೇಕು’
ಘಟ್ಟಕ್ಕೆ ಸ್ವಲ್ಪ extension ಕೊಟ್ಟು ನೋಡಿದರೆ, ಈಗಿನ ಕಾಲದ ಬೇಕುಗಳು ಹಣದ ವಿಚಾರದಲ್ಲಿ ಬಹಳ ದುಬಾರಿ ಸ್ತಿತಿಯಲ್ಲಿರುವಂತಹುಗಳು. Hair-cutಗಳು,
Watchಗಳು, Scootarಗಳು, CellPhoneಗಳು, ಇನ್ನೂ ಸ್ವಲ್ಪ ಮೇಲಕ್ಕೆ ಹೊದರೆ, ಹೊಸ ಮಾದರಿಯ Carಗಳು..ಹೀಗೆ
ಇವೆಲ್ಲಾ ನಮ್ಮ ಈಗಿನ ಬೇಕುಗಳಾಗಿವೆ!
ಈಗ ನಮ್ಮ ಈ ’ಬೇಕು’
ಪ್ರಶ್ನೆಗೇ ಸ್ವಲ್ಪ extension ಕೊಟ್ಟು ನೋಡಿದರೆ ಅದು ಬೆಳೆಯುತ್ತಾ ಬೆಳೆಯುತ್ತಾ ಮುಂದೆ ಒಂದು ದಿನ
’ಬೇಕಾ?’ ಅಗುತ್ತದೆ. ಇನ್ನೂ ಮುಂದಕ್ಕೆ ಹೋದರೆ
’ಬೇಕಾಗಿತ್ತಾ?’ ಅಗಬಹುದು, ಬಹಳಸಲ ಆಗಿಯೇ ಆಗುತ್ತದೆ.
ಬೇಕು ಎಂಬುದು ಬೇಕಾ ಅಗಲು
ಏನು ಕಾರಣ? ಬನ್ನಿ ಸ್ವಲ್ಪ ಯೋಚನೆ ಮಾಡುವ.
ಬೇಕು ಏಂದರೆ ಅವಶ್ಯಕತೆ
ಇರಬಹುದು, ಆಸೆ ಇರಬಹುದು ಅಥವಾ ಇನ್ನಾವುದೋ ಬಲದ ಒತ್ತಡವಿರಬಹುದು. ಈ ಬೇಕು ಅನ್ನುವುದು ಬದುಕಿನಲ್ಲಿ
ಆಗಾಗ ನಾವೇ ಅಥವಾ ಒತ್ತಡಕ್ಕೊಳಗಾದ ನಾವು ಸೃಷ್ಟಿಸಿಕೊಳ್ಳುವ ಒಂದು ಖಾಲಿ ಜಾಗ ’space’ ಎನ್ನಬಹುದು.
ಖಾಲಿ space ಮಾಡಿದ್ದಾಯಿತು ಇನ್ನು ಅಲ್ಲಿ ಎನಾದರು, ತುಂಬಿಸಬೇಕಲ್ಲವೇ? ಏನು ತುಂಬಿಸುತ್ತೇವೆ ಎಂಬುದು
ಆಗಲೇ ನಿರ್ಧಾರವಾಗಿರುತ್ತದೆ, ಅದಕ್ಕೆ ತಕ್ಕ ಸದಾವಕಾಶಕ್ಕಾಗಿ ನಮ್ಮ ಕಾಯುವಿಕೆ ನಡೆದಿರುತ್ತದೆ ಅಷ್ಟೆ.
ಸದಾವಕಾಶ ಸಿಕ್ಕಿ space ತುಂಬಿಸಿದ ಮೇಲೆ ! ಕೆಲವು ದಿನ ತುಂಬಿರುವ space ಅನ್ನು ನೋಡುತ್ತಿರುತ್ತೇವೆ,
ಅಂದರೆ ತುಂಬಿದ ಆನಂದದ ಸುಖದಲ್ಲಿ ತೇಲುತ್ತಿರುತ್ತೇವೆ. ಮತ್ತೊಂದು spaceನ ನಿರ್ಮಾಣ ನಮಗೆ ಗೊತ್ತಿಲ್ಲದೇ
ನಮ್ಮ ಮನದಲ್ಲಿ ನಡೆದಿರುತ್ತದೆ, ಅದನ್ನು ನಾವು ಗಮನಿಸಿಯೂ ಗಮನಿಸದಂತೆ ವರ್ತಿಸುತ್ತಿರುತ್ತೇವೆ. Space
ಸೃಷ್ಟಿಯಾಯಿತೆಂದರೆ ಮುಗಿಯಿತು. ನಮ್ಮ ಮೊದಲ ತುಂಬಿರುವ space ಈಗ ’ಬೇಕಾ’ ಅಗಿಬಿಟ್ಟಿರುತ್ತದೆ!
Teenage ಆಯಿತು,
ಈಗ ಇನ್ನು ಸ್ವಲ್ಪ ಮುಂದೆ ಹೋಗುವ, ಕಾಲಕ್ಕೆ, ನಮ್ಮ ಮನಸ್ಸಿಗೆ, ಶರೀರಕ್ಕೆ extension ಕೊಡುವ. ಈಗ
ನಮ್ಮ ಹಲವಾರು ಹಳೆಯ ಬೇಕುಗಳು ಹೊಸ ಬೇಕಾ? ಆಗಿಬಿಟ್ಟಿವೆ. ಅಂದರೆ ನಾವು ಈಗ ಸರಿ ಸುಮಾರು
ಮಧ್ಯ-ವಯಸ್ಸಿನಲ್ಲಿರಬೇಕಾದ ಹೊತ್ತು ಅಂದುಕೊಳ್ಳೋಣ. ಅಲ್ಲದೆ ಹೊಸ ’ಬೇಕು’ಗಳು ಹುಟ್ಟಿಕೊಡಿವೆ, ಅವೆಂದರೆ, ಒಳ್ಳೆಯ ಉದ್ಯೋಗ, ಮನೆ ನಿರ್ಮಾಣ, ಮದುವೆ, ಮಕ್ಕಳು..ಇತ್ಯಾದಿ
ಇತ್ಯಾದಿ. ಎಚ್ಹರ ! ಈ ಎಲ್ಲವೂ ಮುಂದೊಮ್ಮೆ ’ಬೇಕಾ?’
ಗಳಾಗಬಹುದು
ಈಗ ಬೇಕಾ? ಎಂಬುದು ಬೇಕಾಗಿತ್ತಾ? ಏಕಾಗುತ್ತದೆ?ಇದಕ್ಕೆ ಕಾರಣ ಹುಡುಕುವ ಬನ್ನಿ.
ಬೇಕು ಮಾತು ಬೇಕಾಗಿತ್ತಾ
ನಡುವೆ ಇರುವ ಅಂತರ ಬಹಳ ಕಡಿಮೆ, ಈ ಅಂತರಕ್ಕೆ ಮುಖ್ಯ ಕಾರಣ ನಮ್ಮ ಬೇಕು? ಮೇಲಿನಿಂದ ನಾವು ಕಳೆದುಕೊಳ್ಳುವ attraction ಅಂದರೆ ಭಾವನಾತ್ಮಕ ಸಂಭದದಲ್ಲ್ಲಾಗುವ
ಬದಲಾವಣೆ. ಮೊದಲು ’ಬೇಕು’ ಎಂಬುದು ಹೇಗೆ ಅವಶ್ಯಕತೆಯಗಿರುತ್ತದೋ
ಕಾಲಾನಂತರ ಅದೇ ಬೇಕಾಗಿತ್ತಾ? ಆದ ಮೇಲೆ ಸಮಸ್ಯೆಯಾಗಿ ತಲೆದೋರಬಹುದು.
ಆದರೆ ಒಂದು ಮಾತು,
ನಾವೆಲ್ಲರೂ ಈ ಬೇಕು ! ಬೇಕಾ? ಬೇಕಾಗಿತ್ತಾ? ಮೂಲಕ ನಮ್ಮ ಬದುಕನ್ನು ಸಾಗಿಸಲೇ
ಬೇಕು. ನೋಡಿ ನನ್ನ ಮೇಲಿನ sentence ಕೂಡಾ ಬೇಕು ಎಂದೇ ಕೊನೆಗೊಂಡಿದೆ.
ಕೊನೆಗೆ ನಮ್ಮ ಬೇಕುಗಳು ಹೀಗಿರಲಿ:
ನಮ್ಮ ಬೇಕುಗಳನ್ನ ಅದಷ್ಟು ಅಂಕೆಯಲ್ಲಿಡೋಣ, ಹೆಚ್ಚು ಬೇಕುಗಳುಗಳಿಂದ, ಹೆಚ್ಚು ಸಮಸ್ಯೆಗಳು / ಬೇಕಾಗಿತ್ತಾ? ಗಳನ್ನು ಹುಟ್ಟುಹಾಕುವುದು ಬೇಡ. ಇಂದಿನ
ಬೇಕುಗಳು, ಬೇಕಾ? ಅಥವಾ ಬೇಕಾಗಿತ್ತಾಗಳಾಗಿ ಬದಲಾಗಲು ಹಿಂದಿನಂತೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲಾ
! ಇದಕ್ಕೆ ಕಾರಣ ನಮಗೆಲ್ಲರಿಗೂ ಗೊತ್ತೇ ಇದೆ ಅಂದುಕೊಳ್ಳುತ್ತೇನೆ. ದಿನ ನಿತ್ಯವೂ ನಾವೂ ನೊಡುತ್ತಲೇ
ಇದ್ದೇವೆ ಕೂಡ.
ನನ್ನ ನೆಚ್ಚಿನವರೊಬ್ಬರ
ಮಾತಿನಲ್ಲಿ ಹೇಳುವುದಾದರೆ –
ನಾವು ಯಾವುದನ್ನೇ ಆದರು ಎರಡು ಕಾರಣಗಳಿಗಾಗಿ ಇಷ್ಟಪಡುತ್ತೇವೆ. ಒಂದು ಅದು ನಮ್ಮಲ್ಲಿ ಇಲ್ಲ ಎಂಬ ಕಾರಣ,
ಇನ್ನೊಂದು ಅದು ನಮ್ಮಲ್ಲಿ ಇದೆ ಎಂಬ ಕಾರಣದಿಂದ. ಸೋಜಿಗದ ಸಂಗತಿಯೆಂದರೆ ಮುಂದೊಂದು ದಿನ ನಾವೇ
ನಮ್ಮಲ್ಲಿರುವುದನ್ನು ಈ ಮೇಲಿನ ಎರಡು ಕಾರಣಗಳಿಂದಲೇ ಇಷ್ಟಪಡುವುದಿಲ್ಲ !!
~