Tuesday, October 9, 2012

ದೇವರಿಗೆ ಅಲಂಕಾರ, ಅಭಿಷೇಕ ಇತ್ಯಾದಿ !



ಇದನ್ನು ಬರೆಯುವ ಮೊದಲು, ನನಗನ್ನಿಸಿದ ಮಟ್ಟಿಗೆ ದೇವರು ! ಎಂಬ ತಲೆಬರಹದ ಲೇಖನವೊಂದನ್ನು ಬರೆಯುವ ಯೋಚನೆ ನನಗೆ ಬಂದಿತ್ತು, ಅದಕ್ಕೆ ಬೇಕಾದ ವಿಷಯ / ಅವಿಷಯಗಳನ್ನು ಹುಡುಕುವ ಮೊದಲೇ ಈಗ ನಾನು ಬರೆಯುತ್ತಿರುವ ತಲೆಬರಹ ನನ್ನ ತಲೆಯನ್ನು ಕೊರೆಯಲು ಶುರು ಮಾಡಿದ್ದರಿಂದ ಈ ಲೇಖನ ಸೃಷ್ಟಿಯಾಗುತ್ತಿದೆ.
ಅಲಂಕಾರ ಯಾಕೆ? ಅಂತ ಕೇಳಿದರೆ ಮೊದಲು ನನಗೆ ಚೆನ್ನಾಗಿ ಕಾಣಿಸಲು, ನಂತರ ಬೇರೆಯವರಿಗೆ ಎಂದು ಉತ್ತರ ಬಂದರೆ ಅದು ಸೂಕ್ತ ಎಂದನ್ನಿಸುತ್ತದೆ. ಆದರೆ ಈಗೀಗ ಅದು ತಿರುಗುಮುರುಗಾಗುತ್ತಿದೆ, ಸರಿ ಅದನ್ನು ಬಿಡಿ, ಸಧ್ಯಕ್ಕೆನಾವು ನಮ್ಮ ಸೂಕ್ತ ಉತ್ತರದೊಂದಿಗೆ ಮುಂದುವರೆಯುವ – ಮೊದಲು ನನಗೆ ನಂತರ ಇತರರಿಗೆ !

ಇನ್ನು ಅಭಿಷೇಕಕ್ಕೆ ಬಂದರೆ, ಅದನ್ನು ನಾನು ಒಂದು ರೀತಿಯ ಸ್ನಾನ ಎಂದು ಭಾವಿಸಿದ್ದೇನೆ.
ಸರಿ ಸಾಮಾನ್ಯ ವಿವರಣೆ ಸಿಕ್ತಲ್ಲಾ, ಈಗ ನಮ್ಮ ದೇವರ ಅಲಂಕಾರ, ಅಭಿಷೇಕಕ್ಕೆ ಬರುವ.
ಮಾನವ ದೇವರನ್ನು ತನ್ನ ಭಯ ನಿವಾರಣೆಗೆ, ತನ್ನನ್ನು ತಾನು ನಿಗ್ರಹದಲ್ಲಿರಿಸಿಕೊಳ್ಳಲು, ತನಗಿಂತ ಮಿಗಿಲಾದ ಬೇರೊಂದು ಶಕ್ತಿ ಇದೆ, ಅದರ ಮುಂದೆ ನಾನು ಏನು ಇಲ್ಲ, ಎಂದು ಸದಾ ನೆನಪಿಸಿಕೊಳ್ಳಲು ಸೃಷ್ಟಿಸಿದ…..ಇನ್ನು ಅನೇಕ ಕಾರಣಗಳಿರಬಹುದು, ಈಗ ಇಷ್ಟು ಸಾಕು.  ಸರಿ ಶಕ್ತಿ ಸೃಷ್ಟಿಯಾದಮೇಲೆ ಅದಕ್ಕೊಂದು ರೂಪ ಬೇಡವೇ ಇಲ್ಲದಿದ್ದರೆ ನಾವು ಏಕಾಗ್ರತೆ ಮೂಡಿಸಿಕೊಳ್ಳಲು ಕಷ್ಟಸಾಧ್ಯ. ಅದಕ್ಕಾಗಿ ದೇವರಿಗೆ ಒಂದು ರೂಪ ಬಂತು,
ಆಯಿತು, ಅಲಂಕಾರದ ಕಾರಣ?, ನಮ್ಮ ಮುಖಗಳನ್ನೇ ನಾವು ಪದೇ ಪದೇ ನೋಡಿ ಬೇಸರ ಮೂಡಿ, ಆಗಾಗ ಬದಲಿಸಿಕೊಳ್ಳಲು ಹೆಣಗುವುದಿಲ್ಲವೇ? ಹಾಗೆ ನಮ್ಮ ದೇವರುಗಳನ್ನುತಾನೆ ಹೇಗೆ ಒಂದೇ ರೀತಿಯಲ್ಲಿ ನೋಡಲು ಸಾಧ್ಯ? ಅದಕ್ಕಾಗಿ ದಿನಕ್ಕೊಂದು ಅಲಂಕಾರವನ್ನು ಮಾಡಿ, ನಮ್ಮ ಮನಸಂತೊಷಪಡಿಸಿಕೊಳ್ಳುತ್ತೇವೆ, ಇಲ್ಲಿ ನಮ್ಮ ಸ್ವಾರ್ಥವೇ ಹೆಚ್ಹು ಎಂದು ನನಗೆ ಅನ್ನಿಸುತ್ತದೆ. ನಾ ಮೇಲೆ ತಿಳಿಸಿದಂತೆ, ಇದು ತಿರುಗುಮುರುಗಾಯಿತು, ಮೊದಲು ಇತರರಿಗೆ ನಂತರ ನಮ್ಮ ದೇವರಿಗೆ, ಅವನಿ/ಳಿ ಗೆ ಇಷ್ಟವಾಯಿತೋ ಇಲ್ಲವೋ ಗೊತ್ತಿಲ್ಲ ಅಂತು ನ(ನ/ಮ)ಗೆ ಚೆನ್ನಾಗಿ ಕಂಡರೆ ಸಾಕು ಬಿಡಿ.
ವೈಜ್ನಾನಿಕವಾಗಿ, ಈ ರೀತಿಯ ಸ್ನಾನಕ್ಕೆ ಕಾರಣ, ದೇವರ ವಿಗ್ರಹದ ರಕ್ಷಣೆ. ಸಾಮಾನ್ಯವಾಗಿ ಮೂಲ ವಿಗ್ರಹಗಳು ದೇವಸ್ತಾನದ ಗರ್ಭಗುಡಿಯಲ್ಲಿರುತ್ತವೆ. ಈ ಗುಡಿಗೆ ಕಿಟಕಿಗಳು ಇಲ್ಲದಿರುವುದೇ ಹೆಚ್ಹು, ಆದ್ದರಿಂದ ಈ ಗರ್ಭಗುಡಿ ಓಳ ಭಾಗ ಯಾವಾಗಲು ಹೆಚ್ಹು ಬಿಸಿಯಾಗಿರುತ್ತದೆ. ಈ ಉಷ್ಣತೆ ವಿಗ್ರಹದ ಶಿಲೆಯ ಮೇಲೆ ಪರಿಣಾಮ ಬೀರುತ್ತದೆ, ಹೀಗೆಯೆ ಬಿಟ್ಟರೆ ಕಾಲಾನಂತರದಲ್ಲಿ ವಿಗ್ರಹದ ಮೇಲೆ ಬಿರುಕುಗಳು ಬೀಳಬಹುದು. ಇದನ್ನು ತಪ್ಪಿಸಲು ಆಗಾಗ ಅಭಿಷೇಕಗಳನ್ನು ಮಾಡುವುದರಿಂದ ವಿಗ್ರಹದ ಶಿಲೆ ಹೆಚ್ಹುಕಾಲ ಸುಭದ್ರವಾಗಿರುತ್ತದೆ.
ಅಭಿಷೇಕದ ಕಾರಣ ಕಂಡುಕೊಂಡೆವು, ಇನ್ನು ಅಲಂಕಾರದ ಕಡೆ ಕಣ್ಣು ಹರಿಸೊಣವೇ, ಹರಿಸುವುದೇನು? ನಮ್ಮಗಳ ಕಣ್ಣು ಅತ್ತ ಹೋಗೆ ಹೋಗುತ್ತದೆ, ಗಮನ ಸೆಳೆಯುವುದೇ ಅಲಂಕಾರದ ಮೂಲ ಉದ್ಡೇಶ್ಯವಲ್ಲವೇ?.
ನಾನು ನೋಡಿದ/ಕೇಳಿದ ಅಭಿಷೇಕಗಳು – ನೀರು, ಹಾಲು ಜೇನುತುಪ್ಪ, ಎಳನೀರು, ಮೊಸರು, ಹಣ್ಣುಗಳು, ವಿಭೂತಿ ಹೀಗೆ ಇನ್ನು ಇತರೆ ಇತ್ಯಾದಿ.
ನಾನು ನೋಡಿದ/ಕೇಳಿದ ಅಲಂಕಾರಗಳು – ಹೂ / ಹೂ ಮಾಲೆಳಿಂದ, ಹಣ್ಣುಗಳಿಂದ, ತಿನ್ನುವ ವಸ್ತುಗಳಿಂದ (ಉದಾ - ಬೆಣ್ಣೆ), ಅರಿಶಿನ / ಕುಂಕುಮ, ಆಭರಣಗಳಿಂದ, ವಸ್ತ್ರಗಳಿಂದ ಹೀಗೆ ಇನ್ನು ಇತರೆ ಇತ್ಯಾದಿ.
ಯೋಚನೆ ಮಾಡಿ, ಸಾಮಾನ್ಯವಾಗಿ ನಾವು ದೇವರನ್ನು ನಮ್ಮಂತೆಯೇ ಅಂದುಕೊಡಿದ್ದೇವೆ – ಅಂದರೆ ಶರೀರ ರೂಪ, ಜೊತೆಗೆ ಇನ್ನು ಹೆಚ್ಹು ಅಂತಲು – ಹೆಚ್ಹು ಶಕ್ತಿ, ಮಾನವಾತೀತ ರೂಪಗಳು, ಆಯುಧಗಳನ್ನು ಹೊಂದಿರುವವ ಹೀಗೆ.
ಈಗ ಸ್ವಲ್ಪ ಕಾಲ ನಾವು ನಮ್ಮನ್ನು ದೇವರ ಸ್ಥಾನದಲ್ಲಿ ಇರಿಸಿ ನೋಡುವ (ಕೇವಲ ಅಲಂಕಾರ / ಅಭಿಷೇಕಗಳಿಗೆ ಸಂಭದ ಪಟ್ಟಂತೆ ಅಷ್ಟೆ !).
ಅಭಿಷೇಕ –
ನಮ್ಮ ಮೇಲೆ ತಣ್ಣೀರು / ಎಳ / ಹಾಲು ಸುರಿದರೆ ಹೇಗಿರುತ್ತದೆ?, ನಿಜ ಸ್ವಲ್ಪ ಮಟ್ಟಿಗೆ ತಡೆದುಕೂಳ್ಳಬಹುದು, ಆದರೆ ಶರೀರ ಕಂಪಿಸುವುದಂತು ನಿಜ ಅಲ್ಲವೇ, ಇನ್ನು ದೇವರ ಗತಿ ಹಿಸಿ !
ನಮ್ಮ ಮೇಲೆ ಜೇನುತುಪ್ಪ ಸುರಿದರೆ, ಹಿಸಿದರೆ ಶರೀರಪೂರ ಕಂಬಳಿ ಹುಳು ಹರಿದಂತೆ ನನಗೆ ಅನ್ನಿಸುತ್ತಿದೆ, ಇನ್ನು ದೇವರಿಗೆ?
ಅಲಂಕಾರ –
ನಮ್ಮ ಮೇಲೆ ಒಂದು ಹಾಸಿಗೆಯ ದಪ್ಪದಷ್ಟು ಹೂವಿನ ಅಲಂಕಾರವನ್ನು ಹೇರಿದರೆ, ಹೇಗನ್ನಿಸುತ್ತದೆ, ಕೆಲವೇ ಕ್ಷಣಗಳಲ್ಲಿ ಮೈ ಬೆವರಿ ಉಸಿರಾಡಲು ಕಷ್ಟವಾಗುತ್ತದೆ, ಇನ್ನು ನಮ್ಮ ದೇವರು ದಿನ ಪೂರ್ತಿ ಇದನ್ನು ಹೇಗೆ ಸುಖದಿಂದ ಹೊರಬಲ್ಲ ಯೋಚಿಸಿ?
ಇನ್ನು ಸರಗಳನ್ನು / ಆಭರಣಗಳನ್ನು, ಒಂದರ ಮೇಲೊಂದು ಹಾಕುತ್ತಾ ಹೋಗಿ, ನಿಮ್ಮ ಕತ್ತಿನ ಗತಿ ಏನಾಗಬೇಡ? ದೇವರ ಕತ್ತಿನ ಬಗ್ಗೆ ನಮಗೆ ಕಾಳಜಿ ಇದೆಯೇ?
ಸಂಪೂರ್ಣ ಶರೀರಕ್ಕೆ ಣ್ಣೆ ಸವರಿಕೊಂಡು ಎಷ್ಟು ಹೂತ್ತು ನಿಲ್ಲಲು ಸಾಧ್ಯ? ಆ ದೇವರನ್ನು ಯಾರು ಕಾಪಾಡಬೇಕೋ? ನನಗೆ ಗೊತ್ತಾಗುತ್ತಿಲ್ಲ !

ಕೊನೆಗೆ:
ನಮ್ಮಗಳ ಸ್ವಾರ್ಥಕ್ಕೆ ದೇವರುಗಳನ್ನು ಗುರಿ ಮಾಡುವುದು ಸರಿಯೇ?
ನಾವು ಹೇಗೆ ಸರಳವಾಗಿ ಸ್ನಾನವನ್ನು ಮಾಡಿಕೊಳ್ಳುತ್ತೇವೋ ಹಾಗೇ ದೇವರಿಗೂ ಮಾಡಿಸುವ, ಸಾಧ್ಯವಾದರೆ ಉಗುರು ಬೆಚ್ಹಗಿನ ನೀರಿನಲ್ಲಿ (ವಿಗ್ರಹ ಮುಖ್ಯ !), ಕೊಳೆ, ಕಸ, ಇತ್ಯಾದಿಗಳನ್ನು ವಿಗ್ರಹದ ಮೂಲೆ, ಕೊನೆಗಳಿಂದ ತೆಗೆದು, ಶುಬ್ರವಾಗಿಡುವ. ಗರ್ಭಗುಡಿಯನ್ನು ಗಾಳಿಯಾಡುವಂತೆ ಇಡುವ.
ಸರಳವಾದ, ಭಾರವಿಲ್ಲದ, ದಪ್ಪವಲ್ಲದ, ವೈಭವೋಪೇತವಲ್ಲದ, ಸುಂದರವಾದ ಅಲಂಕಾರವನ್ನು ಮಾಡುವ, ವಿಗ್ರಹದ ಮೂಲ ರೂಪವು ತನ್ನ ಸೌಂದರ್ಯವನ್ನು ತೋರಿಸುವಂತೆ ಅಲಂಕಾರವನ್ನು ಮಾಡುವ.
ಎಷ್ಟು ಬೇಕೋ ಅಷ್ಟೀದ್ದರೆ ಚೆನ್ನ, ಅತಿಯಾದರೆ ಅಮೃತವೂ ವಿಷವೇ ಅಲ್ಲವೇ?

1 comment: